ಸಮುದ್ರದ ಮೊರೆತದ ಸದ್ದು ಕಿವಿಗಡಚಿಕ್ಕಿದೆ. ನಾನಿದರ ಭಯಂಕರ ಅಬ್ಬರವನ್ನು ತಾಳಲಾರೆ. ನನ್ನನ್ನು ಇದರಿಂದ ಪಾರುಮಾಡು ದೇವರೇ... ನನ್ನಿಂದ ಏನಪರಾಧವಾಗಿದೆ ಎಂದು ನನಗೀ ಸಂಕಷ್ಟ ? ಮನಸ್ಸೆಂಬ ಮಹಾಶರಾಧಿಯೊಳು ಯಾಕೆ ಈ ತರ ಗೊಂದಲ ... ? ಶಾಂತಿಯೇ ಇಲ್ಲದಂತಾಗಿದೆ ಏಕೆ ? ಯಾವ ಕಾರಣವೆಂದೂ ತಿಳಿಯಲಾರೆನಲ್ಲ ... ? ಯಾಕೆ ಯಾಕೆ ಯಾಕೆ ??? ಎಲ್ಲರ ಮನಸ್ಸಿನಲ್ಲೂ ಇಂಥದ್ದೊಂದು ಭಾವ ಮೂಡಿಯೇ ಮೂಡುತ್ತದೆ. ಯಾಕೆ ಬೇಸರ, ಗೊಂದಲ, ಕಿರಿಕಿರಿಗಳಾಗುತ್ತವೆ ಎಂದೂ ತಿಳಿಯದು ... ನನ್ನ ಮನಸ್ಸಿನ ಅಂತ ಒಂದು ಸಂದರ್ಭದಲ್ಲೇ ಈ blog ಉಗಮಿಸಿದೆ. ಅದಕ್ಕಾಗೇ ಇದರ ಹೆಸರು "ಸಮುದ್ರದ ಮೊರೆತ"!!!
No comments:
Post a Comment